ಭಾರತದಲ್ಲಿ ಸೃಷ್ಟಿಯಾದ ಟೈಟನ್ ಕಥೆ ಅಂತಿಮ ಭಾಗ

ಮೊದಲ ಎರಡು ಭಾಗಗಳಲ್ಲಿ ವಾಚ್ ಉತ್ಪಾದನೆ ಮತ್ತು ಫ್ಯಾಕ್ಟರಿ ಸ್ಥಾಪನೆಯ ಬಗ್ಗೆ ತಿಳಿಸಲಾಗಿದೆ. ಆದರೆ ಈಗ ಟೈಟನ್ ಕಂಪನಿಯ ನಿಜವಾದ ಕಠಿಣ ಸವಾಲು ಎದುರಾಗಿದೆ, ಅದೇ 'ಸೇಲ್ಸ್' ಅಥವಾ ಮಾರಾಟ.
ಅಷ್ಟು ದೊಡ್ಡ ಸ್ಪರ್ಧಾತ್ಮಕ ಕಂಪನಿಗಳ ನಡುವೆ ಟೈಟನ್ ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಂಡಿತು ಮತ್ತು ಮಾರ್ಕೆಟ್‌ನಲ್ಲಿ ಹೇಗೆ ಪರ್ಫಾರ್ಮ್ ಮಾಡಿತು ಎಂಬ ರೋಚಕ ಪ್ರಯಾಣದ ಬಗ್ಗೆ ಈ ಭಾಗದಲ್ಲಿ ತಿಳಿಸುತ್ತವೆ
ಮುರಳಿ ಅವರು ತಮ್ಮ ತಂಡದೊಂದಿಗೆ ಬ್ರ್ಯಾಂಡ್‌ನ ಗುರುತನ್ನು ಬಲಪಡಿಸಲು ಚರ್ಚಿಸುತ್ತಾರೆ. ಅಂತಿಮವಾಗಿ 'ಟೈಟನ್ ಕ್ವಾರ್ಟ್ಜ್ ಟಾಟಾ' (Titan Quartz Tata) ಎಂಬ ಸರಳ ಮತ್ತು ಪರಿಣಾಮಕಾರಿ ಟ್ಯಾಗ್‌ಲೈನ್‌ಗೆ ಒಪ್ಪಿಗೆ ಸೂಚಿಸಲಾಗುತ್ತದೆ. ಮುರಳಿ ಅವರು ಮದುವೆಗಳನ್ನು ಭಾವನಾತ್ಮಕ ಸಂದರ್ಭಗಳಾಗಿ ಬಳಸಿಕೊಂಡು, ಟೈಟನ್ ವಾಚ್‌ಗಳನ್ನು 'ಅತ್ಯುತ್ತಮ ಉಡುಗೊರೆ' (Best Wedding Gift) ಎಂದು ಪ್ರಚಾರ ಮಾಡುವ ತಂತ್ರವನ್ನು ದೇಸಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಪಡೆಯುತ್ತಾರೆ.
ದೇಸಾಯಿ ಅವರು ಬಟ್ಟೆ ಶಾಪಿಂಗ್ ಅನುಭವದ ನಂತರ, ಗ್ರಾಹಕರು ಹೆಚ್ಚಿನ ಆಯ್ಕೆಗಳನ್ನು (Variety) ಬಯಸುತ್ತಾರೆ ಎಂದು ಅರಿತುಕೊಳ್ಳುತ್ತಾರೆ. ಈ ಪಾಠವನ್ನು ಟೈಟನ್ ವಾಚ್‌ಗಳಿಗೆ ಅಳವಡಿಸಿ, ಹೆಚ್ಚಿನ ವಿನ್ಯಾಸಗಳ ಮೇಲೆ ಬಂಡವಾಳ ಹೂಡಲು ತಂಡದೊಂದಿಗೆ ಚರ್ಚಿಸುತ್ತಾರೆ.
ಟೈಟನ್‌ನ ಮೊದಲ ಟಿವಿ ಜಾಹೀರಾತನ್ನು ಬಿಡುಗಡೆ ಮಾಡಲು ದೇಸಾಯಿ ಮುಂದಾದಾಗ, ಆಕಾಶ್ ಮತ್ತು ಗೋಪಾಲನ್ ಕಂಪನಿಯ ಆರ್ಥಿಕ ಸ್ಥಿತಿಯನ್ನು ನೆನಪಿಸಿ, ಅತಿಯಾದ ಬಂಡವಾಳ ಹೂಡಿಕೆ ಅಪಾಯಕಾರಿ ಎಂದು ಎಚ್ಚರಿಸುತ್ತಾರೆ.ಪ್ರತಿಯೊಬ್ಬರ ಮನಸ್ಸಿಗೆ ಸುಲಭವಾಗಿ ತಲುಪಲು 'ಸಂಗೀತ' (Music) ಅತ್ಯುತ್ತಮ ಸಾಧನ ಎಂಬ ಮೇಘ ಅವರ ಸಲಹೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇದರೊಂದಿಗೆ ಟಿವಿ ಜಾಹೀರಾತುಗಳಿಗಾಗಿ ಪರಿಪೂರ್ಣ ಮ್ಯೂಸಿಕ್ ಟ್ಯೂನ್ ಹುಡುಕಾಟ ಆರಂಭವಾಗುತ್ತದೆ.
ಟಿವಿ ಕಮರ್ಷಿಯಲ್‌ಗಾಗಿ ಸೂಕ್ತವಾದ ಮ್ಯೂಸಿಕ್ ಅನ್ನು ಹುಡುಕುತ್ತಿರುವಾಗ, ಜೆಆರ್ಡಿ ಟಾಟಾ ಅವರು ಇಡೀ ತಂಡವನ್ನು ಮ್ಯೂಸಿಕ್ ಕನ್ಸರ್ಟ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಕೇಳಿದ ಮ್ಯೂಸಿಕ್ ಟ್ಯೂನ್ ಟೈಟನ್ ಬ್ರ್ಯಾಂಡ್‌ಗೆ ಹೇಳಿಮಾಡಿಸಿದಂತಿದೆ ಎಂದು ಎಲ್ಲರಿಗೂ ಅನಿಸುತ್ತದೆ. ಇದನ್ನು ಬಳಸಿಕೊಂಡು ಮಾಡಿದ ಜಾಹೀರಾತು ಇಂಡಿಯಾದಾದ್ಯಂತ ದೊಡ್ಡ ಮಟ್ಟದ ಹಿಟ್ ಆಗುತ್ತದೆ.
ಜೆಆರ್ಡಿ ಟಾಟಾ ಅವರು ಖುದ್ದು ದೇಸಾಯಿ ಅವರ ಮನೆಗೆ ಬಂದು, ಟೈಟನ್ ವಾಚ್ ಅನ್ನು 'ವರ್ಲ್ಡ್ ಕ್ಲಾಸ್ ವಾಚ್' ಎಂದು ಕರೆದು ಪ್ರಶಂಸಿಸುತ್ತಾರೆ. ಆದರೆ ದೇಸಾಯಿ ಅವರು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಬೆಸ್ಟ್ ವಾಚ್ ತಯಾರಿಸುವ ಗುರಿ ತಮ್ಮದಾಗಿದೆ ಎಂದು ಹೇಳುತ್ತಾರೆ.
ದೇಸಾಯಿ ಅವರು ಆಕಾಶ್‌ಗೆ ಅಚ್ಚರಿಯ ರೀತಿಯಲ್ಲಿ ಆರು ತಿಂಗಳ 'ಪೇಡ್ ಲೀವ್' (Paid Leave) ನೀಡುತ್ತಾರೆ. ಆಕಾಶ್ ಅವರು ತನ್ನ ಕುಟುಂಬದೊಂದಿಗೆ ವೆಕೇಶನ್ ಎಂಜಾಯ್ ಮಾಡಲೆಂದು ಈ ರಜೆಯನ್ನು ದೇಸಾಯಿ ಘೋಷಿಸುತ್ತಾರೆ.ದೇಸಾಯಿ ಅವರು ಟೈಟನ್ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿ, ಜೆಆರ್ಡಿ ಟಾಟಾ ಅವರ ಅನುಮತಿಯೊಂದಿಗೆ ಯುರೋಪ್ ಮಾರುಕಟ್ಟೆಗೆ ಕಾಲಿಡುತ್ತಾರೆ. ಅಲ್ಲಿನ ಪ್ರೀಮಿಯಂ ಸ್ಟೋರ್‌ಗಳಲ್ಲಿ ಟೈಟನ್ ಅನ್ನು ಪರಿಚಯಿಸಲು ಸುಮಾರು 50 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಿಕೆ ಮಾಡುತ್ತಾರೆ. ರಜೆಯ ನಂತರ ಕೆಲಸಕ್ಕೆ ಹಿಂತಿರುಗಿದ ಆಕಾಶ್‌ಗೆ, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೇಸಾಯಿ ಅವರು ಇಷ್ಟು ದೊಡ್ಡ ನಿರ್ಧಾರ ಕೈಗೊಂಡಿರುವುದು ಬೇಸರ ತರುತ್ತದೆ. ಇದು ಟೈಟನ್ ಕಂಪನಿಯ ಸಂಪೂರ್ಣ ಆರ್ಥಿಕತೆಯನ್ನು ಅಪಾಯಕ್ಕೆ ತಳ್ಳುವ ನಿರ್ಧಾರ ಎಂದು ಆಕಾಶ್ ವಿರೋಧಿಸುತ್ತಾರೆ.ದೇಸಾಯಿ ಮತ್ತು ಆಕಾಶ್ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಳ್ಳುತ್ತದೆ. 'ನಾವು' ಎಂಬುದಕ್ಕಿಂತ 'ನಾನು' ಎಂಬ ಅಹಂಕಾರ ಹೆಚ್ಚಾಗಿದೆ ಎಂದು ಆಕಾಶ್ ಆರೋಪಿಸಿ, ಅತೃಪ್ತಿಯಿಂದ ಕಂಪನಿಗೆ ರಾಜೀನಾಮೆ ನೀಡಲು ನಿರ್ಧರಿಸಿ ಪಾರ್ಟಿಯಿಂದ ಹೊರನಡೆಯುತ್ತಾರೆ.ಯುರೋಪ್ ಮಾರುಕಟ್ಟೆಯಲ್ಲಿ ಟೈಟನ್ ವಾಚ್‌ಗಳು ಮಾರಾಟವಾಗದೆ ಭಾರಿ ನಷ್ಟವನ್ನು ಅನುಭವಿಸುತ್ತವೆ. ಕಳೆದ ಐದು ತಿಂಗಳಲ್ಲಿ ಕೇವಲ 30 ವಾಚ್‌ಗಳು ಮಾತ್ರ ಮಾರಾಟವಾಗಿರುತ್ತವೆ. ಇನ್ನು ಎಂಟು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಕಂಪನಿ ಮುಚ್ಚುವ ಭೀತಿ ಎದುರಾಗುತ್ತದೆ.ದೇಸಾಯಿ ಅವರು ಬೋರ್ಡ್ ಸಭೆಯಲ್ಲಿ ತನ್ನ ನಿರ್ಧಾರವೇ ವೈಫಲ್ಯಕ್ಕೆ ಕಾರಣವೆಂದು ಒಪ್ಪಿಕೊಳ್ಳುತ್ತಾರೆ. ಜೆಆರ್ಡಿ ಟಾಟಾ ಅವರು ಸೋಲನ್ನು ಮೆಟ್ಟಿ ನಿಲ್ಲಲು ಪ್ರೇರಣೆ ನೀಡುತ್ತಾರೆ.ಒಂದು ದಿನ ಮನೆಯಲ್ಲಿ ತರಕಾರಿ ಕತ್ತರಿಸುವಾಗ, ದೇಸಾಯಿ ಅವರು ಕತ್ತಿಯ ಸ್ಲಿಮ್ ವಿನ್ಯಾಸವನ್ನು ಗಮನಿಸಿ, ಅತಿ ತೆಳುವಾದ (ultra-slim) ವಾಚ್ ತಯಾರಿಸುವ ಕ್ರಾಂತಿಕಾರಿ ಐಡಿಯಾ ರೂಪಿಸುತ್ತಾರೆ.ತಮ್ಮ ತಂಡದೊಂದಿಗೆ ಸೇರಿ, ಕೇವಲ ಎಂಟು ತಿಂಗಳೊಳಗೆ ಅಸಾಧ್ಯವಾದ ವಾಚ್ ತಯಾರಿಸುವ ಗುರಿಯನ್ನು ದೇಸಾಯಿ ಪ್ರಕಟಿಸುತ್ತಾರೆ. ಇತಿಹಾಸ ನಿರ್ಮಿಸುವ ಸಂಕಲ್ಪದೊಂದಿಗೆ ಇಡೀ ತಂಡ ಹೊಸ ಉತ್ಸಾಹದಿಂದ ಕೆಲಸಕ್ಕೆ ಇಳಿಯುತ್ತದೆ. ತಂಡವು ಎದುರಿಸಿದ ತಾಂತ್ರಿಕ ಸವಾಲುಗಳನ್ನು ಮೆಟ್ಟಿ ನಿಂತು, ಅತಿ ತೆಳುವಾದ 'ಟೈಟನ್ ಎಡ್ಜ್' (Titan Edge) ವಾಚ್ ಅನ್ನು ತಯಾರಿಸುವಲ್ಲಿ ಯಶಸ್ವಿಯಾಗುತ್ತದೆ. ಇದು ಕೇವಲ 22 ಗ್ರಾಂ ತೂಕವಿದ್ದು, ಐದು ರೂಪಾಯಿಯ ನಾಣ್ಯಕ್ಕಿಂತಲೂ ಸ್ಲಿಮ್ ಆಗಿರುತ್ತದೆ.ಜೆಆರ್ಡಿ ಟಾಟಾ ಅವರಿಗೆ ಆಂಡ್ರೆ ಜೂಬಾ ಅವರು ಟೈಟನ್ ಸೋಲಿಗೆ ಕಾರಣವಾದ ಯೂರೋಪಿಯನ್ ಕಂಪನಿಗಳ ಸಂಚಿನ ಬಗ್ಗೆ ತಿಳಿಸುತ್ತಾರೆ. ಟೈಟನ್ ಉತ್ಪನ್ನದ ದೋಷವಲ್ಲ, ಬದಲಾಗಿ ಮಾರುಕಟ್ಟೆಯ ಪೈಪೋಟಿಯನ್ನು ತಡೆಯಲು ಮಾಡಿದ ತಂತ್ರ ಇದಾಗಿತ್ತು ಎಂದು ಅರಿವಾಗುತ್ತದೆ.ಟೈಟನ್ ಎಡ್ಜ್ ಮಾಡೆಲ್ ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ಸನ್ನು ಕಾಣುತ್ತದೆ. ನಂತರದ ವರ್ಷಗಳಲ್ಲಿ ಟೈಟನ್ ಜಗತ್ತಿನ ಅತಿದೊಡ್ಡ ವಾಚ್ ತಯಾರಕರಲ್ಲಿ ಒಂದಾಗಿ ಹೊರಹೊಮ್ಮುತ್ತದೆ.
2011ರಲ್ಲಿ, ದೇಸಾಯಿ ಅವರು ಅಂದು ತಮ್ಮನ್ನು ಅವಮಾನಿಸಿದ್ದ ಆಂಡ್ರೆ ಜೂಬಾ ಅವರ ಕಂಪನಿಯನ್ನು ಟಾಟಾ ಸಮೂಹದ ಮೂಲಕವೇ ಟೇಕ್ ಓವರ್ (Takeover) ಮಾಡುವ ಮೂಲಕ ಇತಿಹಾಸ ಸೃಷ್ಟಿಸುತ್ತಾರೆ.
ಜೆಆರ್ಡಿ ಟಾಟಾ: ಅವರು ಯುರೋಪ್‌ನಲ್ಲಿ ತಮ್ಮ ಪತ್ನಿ ಥೆಲ್ಮಾ ಅವರೊಂದಿಗೆ ರಜೆಯನ್ನು ಕಳೆಯುತ್ತಿದ್ದಾಗ ವಿಧಿವಶರಾದರು.
ಜರ್ಸಿಸ್ ದೇಸಾಯಿ: ಅವರು 2016ರಲ್ಲಿ ನಿಧನರಾದರು. ಅವರ ಅಂತಿಮ ಇಚ್ಛೆಯಂತೆ, ಅವರ ಅಂತ್ಯಕ್ರಿಯೆಯನ್ನು ಹೊಸೂರಿನಲ್ಲಿ ಟೈಟನ್ ಕುಟುಂಬದವರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಅವರ ನಂತರ ಗೌರವ್ ಅವರು ಟೈಟನ್‌ನ ಎಂಡಿ (MD) ಹುದ್ದೆಯನ್ನು
ವಹಿಸಿಕೊಂಡರು.